
WPL 2023 ಇಂದು ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್ ( WPL) ಆರಂಭ ಮುಂಬಯಿಃ ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಇಂದು ಐತಿಹಾಸಿಕ ದಿನವಾಗಿದೆ. ಇಂದು ಮಾರ್ಚ್ 4 ಶನಿವಾರ ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್ ( WPL) ಆರಂಭಗೊಳ್ಳುತ್ತದೆ. ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದ್ದು, ಆ ಮೂಲಕ ಭಾರತದ ಮಹಿಳಾ ಕ್ರಿಕೆಟ್ ರಂಗದ ಹಲವರು ಪ್ರತಿಭೆಗಳಿಗೆ ಹೊಸ ಬದುಕನ್ನು ನೀಡುವ ನಿರೀಕ್ಷೆ ಇರಿಸಲಾಗಿದೆ. 2012 ರಲ್ಲಿ , ಆಂಧ್ರಪ್ರದೇಶದ ವಯೋಮಾನದ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ವನಿತೆಯಾಗಿರುವ 16 ವರ್ಷದ ಆರ್ ಕಲ್ಪನಾ ಅವರು ಕ್ರಿಕೆಟ್ ವೃತ್ತಿ ಜೀವನವನ್ನು ತ್ಯಜಿಸಲು ಮುಂದಾಗಿದ್ದರು. ಮಹಿಳೆಯರಿಗೆ ಕ್ರಿಕೆಟ್ ವೃತ್ತಿ ಜೀವನವನ್ನು ಒದಗಿಸುವುದಿಲ್ಲ ಎಂಬುದು ಆಕೆಯ ತಂದೆಯ ಚಿಂತೆಯಾಗಿತ್ತು. ಆಕೆಯ ತಂದೆ ಆಟೋರಿಕ್ಷಾ ಚಾಲಕರಾಗಿದ್ದು , ತನ್ನ ಮಗಳು ಜೀವನದಲ್ಲಿ "ಸೆಟಲ್" ಆಗಬೇಕೆಂದು ಬಯಸಿದ್ದರು ಮತ್ತು ಅವಳ ಮದುವೆಗೆ ಸಿದ್ಧತೆಗಳನ್ನು ಮಾಡಿದರು. ಆರ್ಥಿಕ ಸಂಕಷ್ಟದಿಂದ ಪಾರಾಗಲು ಕಲ್ಪನಾ ಅವರಿಗೆ ಮದುವೆ ಒಂದೇ ದಾರಿಯಾಗಿತ್ತು. ಭಾರತದ ಮಾಜಿ ವಿಕೆಟ್‌ಕೀಪರ್ ಮತ್ತು ಆಂಧ್ರದ ಆಗಿನ ಕ್ರಿಕೆಟ್ ನಿರ್ದೇಶಕ ಎಂಎಸ್‌ಕೆ ಪ್ರಸಾದ್ ಅವರಿಗೆ ವಿಚಾರ ತಿಳಿದಾಗ , ಅವರು ವನಿತೆಯರು ಕೂಡ ಯಶಸ್ವಿ ಕ್ರಿಕೆಟ್ ವೃತ್ತಿಜೀವನವನ್ನು ಹೊಂದಬಹುದು ಎಂದು ಕಲ್ಪನಾ ಅವರ ...